Thursday, December 25, 2008

ಇದು ಮುಖಾಮುಖಿ

ಇದು ಕೇವಲ ನೋಟವಷ್ಟೇ ಅಲ್ಲ, ನನ್ನ ಸುತ್ತಲೂ ನಡೆಯುತ್ತಿರುವುದನ್ನು ನೋಡುವ, ಅದನ್ನು ಗ್ರಹಿಸುವ ಹಾಗೂ ಗ್ರಹಿಸಿದ್ದನ್ನು ಅಭಿವ್ಯಕ್ತಿಸುವ ರೀತಿ ನನ್ನ ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ. ಇದು ಪ್ರಯೋಗ ಮಾತ್ರ. ಇದು ಲೇಖನವಲ್ಲ

2 comments:

  1. ಸಣ್ಣಕ್ಕಿ ಹಾಡು

    ರಾಗಿ ತೆನೆಯ ಮೇಲೆ ಕುಣಿವ
    ಸಣ್ಣ ಹಕ್ಕಿಯೇ
    ಕಾಳು ಕುಕ್ಕಿ ಸೊಕ್ಕಿ ಹೋದ
    ನನ್ನ ಹಕ್ಕಿಯೇ

    ಒಡೆಯ ಬಂದನೆಂದು
    ಹೆದರಿ ಓಡದಿರುವೆಯೇ
    ತಂತಿ ಮೇಲೆ ಕುಳಿತು
    ಕುಣಿದು ಹಾರುತಿರುಯೇ

    ಎಲ್ಲೋ ಏನೋ ನೀನು ಬಿತ್ತ
    ಮರದ ನೆರಳಿದೆ
    ಅದರ ರೆಂಬೆ ಕೊಂಬೆಯಲ್ಲಿ
    ನಿನ್ನ ಕೊರಳಿದೆ.

    ನಿನ್ನ ಹಾಡು ನಿನ್ನ ಪಾಡು
    ಲೋಕ ಕೇಳಿದೆ
    ಗಾನಸುಧೆಯೇ ನೀನು ಎಂದು
    ಹಾಡಿ ಹೊಗಳಿದೆ.

    ನನ್ನ ಹಕ್ಕಿ ಗಗನ ಚುಕ್ಕಿ
    ಭುವಿಗೆ ಬೆಳಕ ನೀಡಿದೆ
    ಬಾಳ ದನಿಯ ಪುಟಗಳಲ್ಲಿ
    ಹೊರಳಿ ನೋಡಿದೆ

    ಮೂಡುತಕ್ಕಿ ಪಡುವ ನೆಕ್ಕಿ
    ರಂಗು ರಂಗು ಬೀರಿದೆ
    ತೆಂಕ ಸುತ್ತಿ ಬಡಗನೊತ್ತಿ
    ಮಗುವ ಮೊಗದಿ ಮೂಡಿದೆ.

    ನನ್ನ ಹಕ್ಕಿ ಜೀವ ಕುಕ್ಕಿ
    ಕಡಲ ಮೇಲೆ ತೇಲಿದೆ
    ಯಾರ ಕೈಗೂ ಸಿಗದೆ
    ನಿತ್ಯ ಬಿಡದೆ ಇನ್ನೂ ಕಾಡಿದೆ.

    ReplyDelete
  2. waw! comment'nalliro nimma kavide arthapoornavagide, nimma lekhanada niriksheyaliruve

    ReplyDelete