ಸಣ್ಣಕ್ಕಿ ಹಾಡುರಾಗಿ ತೆನೆಯ ಮೇಲೆ ಕುಣಿವಸಣ್ಣ ಹಕ್ಕಿಯೇಕಾಳು ಕುಕ್ಕಿ ಸೊಕ್ಕಿ ಹೋದನನ್ನ ಹಕ್ಕಿಯೇಒಡೆಯ ಬಂದನೆಂದು ಹೆದರಿ ಓಡದಿರುವೆಯೇತಂತಿ ಮೇಲೆ ಕುಳಿತುಕುಣಿದು ಹಾರುತಿರುಯೇಎಲ್ಲೋ ಏನೋ ನೀನು ಬಿತ್ತಮರದ ನೆರಳಿದೆಅದರ ರೆಂಬೆ ಕೊಂಬೆಯಲ್ಲಿನಿನ್ನ ಕೊರಳಿದೆ.ನಿನ್ನ ಹಾಡು ನಿನ್ನ ಪಾಡುಲೋಕ ಕೇಳಿದೆಗಾನಸುಧೆಯೇ ನೀನು ಎಂದು ಹಾಡಿ ಹೊಗಳಿದೆ.ನನ್ನ ಹಕ್ಕಿ ಗಗನ ಚುಕ್ಕಿಭುವಿಗೆ ಬೆಳಕ ನೀಡಿದೆಬಾಳ ದನಿಯ ಪುಟಗಳಲ್ಲಿಹೊರಳಿ ನೋಡಿದೆಮೂಡುತಕ್ಕಿ ಪಡುವ ನೆಕ್ಕಿರಂಗು ರಂಗು ಬೀರಿದೆತೆಂಕ ಸುತ್ತಿ ಬಡಗನೊತ್ತಿಮಗುವ ಮೊಗದಿ ಮೂಡಿದೆ.ನನ್ನ ಹಕ್ಕಿ ಜೀವ ಕುಕ್ಕಿಕಡಲ ಮೇಲೆ ತೇಲಿದೆಯಾರ ಕೈಗೂ ಸಿಗದೆನಿತ್ಯ ಬಿಡದೆ ಇನ್ನೂ ಕಾಡಿದೆ.
waw! comment'nalliro nimma kavide arthapoornavagide, nimma lekhanada niriksheyaliruve
ಸಣ್ಣಕ್ಕಿ ಹಾಡು
ReplyDeleteರಾಗಿ ತೆನೆಯ ಮೇಲೆ ಕುಣಿವ
ಸಣ್ಣ ಹಕ್ಕಿಯೇ
ಕಾಳು ಕುಕ್ಕಿ ಸೊಕ್ಕಿ ಹೋದ
ನನ್ನ ಹಕ್ಕಿಯೇ
ಒಡೆಯ ಬಂದನೆಂದು
ಹೆದರಿ ಓಡದಿರುವೆಯೇ
ತಂತಿ ಮೇಲೆ ಕುಳಿತು
ಕುಣಿದು ಹಾರುತಿರುಯೇ
ಎಲ್ಲೋ ಏನೋ ನೀನು ಬಿತ್ತ
ಮರದ ನೆರಳಿದೆ
ಅದರ ರೆಂಬೆ ಕೊಂಬೆಯಲ್ಲಿ
ನಿನ್ನ ಕೊರಳಿದೆ.
ನಿನ್ನ ಹಾಡು ನಿನ್ನ ಪಾಡು
ಲೋಕ ಕೇಳಿದೆ
ಗಾನಸುಧೆಯೇ ನೀನು ಎಂದು
ಹಾಡಿ ಹೊಗಳಿದೆ.
ನನ್ನ ಹಕ್ಕಿ ಗಗನ ಚುಕ್ಕಿ
ಭುವಿಗೆ ಬೆಳಕ ನೀಡಿದೆ
ಬಾಳ ದನಿಯ ಪುಟಗಳಲ್ಲಿ
ಹೊರಳಿ ನೋಡಿದೆ
ಮೂಡುತಕ್ಕಿ ಪಡುವ ನೆಕ್ಕಿ
ರಂಗು ರಂಗು ಬೀರಿದೆ
ತೆಂಕ ಸುತ್ತಿ ಬಡಗನೊತ್ತಿ
ಮಗುವ ಮೊಗದಿ ಮೂಡಿದೆ.
ನನ್ನ ಹಕ್ಕಿ ಜೀವ ಕುಕ್ಕಿ
ಕಡಲ ಮೇಲೆ ತೇಲಿದೆ
ಯಾರ ಕೈಗೂ ಸಿಗದೆ
ನಿತ್ಯ ಬಿಡದೆ ಇನ್ನೂ ಕಾಡಿದೆ.
waw! comment'nalliro nimma kavide arthapoornavagide, nimma lekhanada niriksheyaliruve
ReplyDelete